"ಬಾನಂಗಳದಿ ಉದಯಿಸದ ತಾರೆಯೊಂದ ಕಂಡೆ ನಾ;
ತೇಲುವ ಮೋಡಗಳಲಿ ತುಂಬಿರುವ ಹನಿಗಲಿ ಮಿಂದೆ ನಾ;
ತಾಯ್ಕಣ್ಣಲಿ ಜನಿಸದ ಶಿಶುವಿಗೆ ಮಮತೆಯ ನೋಡಿ ಬೆರಗಾದೆ ನಾ;
ಜ್ಯಾನಿಯ ಕೈ ಲೇಖನಿಯಲಿರುವ ಶಬ್ದ ಸಾಗರದಿ ಮಿಂದೆ ನಾ;"
"ಜನಿಸಿದ ತಾರೆಯ ಮುಚ್ಚಿದ ಮಾಲಿನ್ಯದ ಮೋಡಕೆ ನಿಂದಿಸಿದೆ ನಾ;
ಕಲುಷಿತ ಕಾಲದಲಿ ಕಾರ್ಮೋಡಗಳ ಹುಡುಕಿದೆ ನಾ;
ಸೌಂದರ್ಯ ಸೆರೆಯಲಿ ಕ್ಷಿಣ್ಣಿಸಿದ ವಾತ್ಸಲ್ಯಕೆ ನೊಂದೆ ನಾ;
ಧನದ ಅಲ್ಪಮೋಹಕೆ ಅಡಯಿಟ್ಟ ಜ್ಞಾನಕೆ ಶಪಿಸಿದೆ ನಾ;"
ಈ ಅಲೆಗಳಲಿ ಸಿಲುಕಿದ ಬುಧಿಗೆ
ಬಂದೊದಗಿತ್ತು ಪ್ರಶ್ನೆಯೊಂದು ಹೀಗೆ
ಹಿಡಿಯಿಥೆ ಹುಚ್ಹು ನಿನಗೆ ?
ನಗುತ ನಾ ಉತ್ತರಸಿದೆ ಪ್ರಶ್ನೆಗೆ ??
ಮೊದಲನೆಯದ ಕರೆದೆನಾ "ಆಶಾ ಕಿರಣವೆಂದು"[Hope]
ಎರಡನೆಯದು ಪ್ರಸ್ತುಥಿಯಲಿ[present] "ಅದರ ಮರಣವೆಂದು" [Dead Hope]
Subscribe to:
Post Comments (Atom)
Please leave your valuable comments
Thanks for Visiting!!!
ತುಂಬ ಚೆನ್ನಾಗಿದೆ. ಒಳ್ಳೆಯ ಒಳಾರ್ಥವಿರುವ ಕವನ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಿನ್ನ ಕಾಳಜಿ ಕವನದಲ್ಲಿ ತುಂಬ ಚೆನ್ನಾಗಿ ಮೂಡಿ ಬಂದಿದೆ.
ReplyDeleteತುಂಬಾ ಒಳಾರ್ಥ ತುಂಬಿದೆ ... ಒಳ್ಳೆಯ ಪ್ರಯತ್ನ ... Nice to read santhosh :)
ReplyDelete